ಶಿಕ್ಷಣ ಹಕ್ಕು ಕಾಯಿದೆಯ ಪ್ರಮುಖ ಲಕ್ಷಣಗಳು:
೧. ಮಗು ಎಂದರೆ ೬ ರಿಂದ ೧೪ ವರ್ಷದೊಳಗಿನ ಗಂಡು ಅಥವಾ ಹೆಣ್ಣು ಮಗು.(ಅಧ್ಯಾಯ ೧. ಸೆಕ್ಷನ್-೨ಅ)
೨. ಈ ಕಾಯಿದೆಯನ್ನು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು -೨೦೦೯ಕಾಯಿದೆ ಎಂದು ಕರೆಯಲಾಗಿದೆ(ಅಧ್ಯಾಯ ೧. ಸೆಕ್ಷನ್-೧(೧))
೩. ೬ ರಿಂದ ೧೪ ವಯೋಮಿತಿಯ ಎಲ್ಲಾ ಮಕ್ಕಳಿಗೆ ೦೧ ರಿಂದ ೦೮ ನೇ ತರಗತಿಯವರೆಗೆ ನೆರೆಹೊರೆಯ ಶಾಲೆಯಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುವ ಹಕ್ಕು ಇರುತ್ತದೆ. (ಅಧ್ಯಾಯ ೨. ಸೆಕ್ಷನ್-೩)
೪. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಈ ಕಾಯಿದೆಯಲ್ಲಿರುವ ಆಂಶಗಳನ್ನು ಜಾರಿಗೊಳಿಸಲು ಧನ ಸಹಾಯವನ್ನು ನೀಡಬೇಕು. (ಅಧ್ಯಾಯ ೩. ಸೆಕ್ಷನ್-೨)
೫. ಶಾಲೆಗಳಲ್ಲಿ ಮೂಲಭೂತ ಸೌಲಭ್ಯ, ಶಿಕ್ಷಕರನ್ನು ಮತ್ತು ಕಲಿಕಾ ಸಾಮಾಗ್ರಿಗಳನ್ನು ಒದಗಿಸಬೇಕು(ಶಿಕ್ಷಣ ಹಕ್ಕು ಕಾಯಿದೆಯ ಶೆಡ್ಯೂಲ್)
೬. ೬ ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ ಮಗುವನ್ನು ಯಾವೂದೇ ಶಾಲೆಗೆ ಸೇರಿಸದೇ ಇರುವಲ್ಲಿ ಅಥವಾ ಸೇರಿಸಿದ್ದರೂ ಆ ಮಗುವೂ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಲಾಗದಿದ್ದಾಗ, ಆ ಮಗುವಿನ ವಯಸ್ಸಿಗನುಗುಣವಾಗಿ ಸೂಕ್ತ ತರಗತಿಗೆ ಮಗುವನ್ನು ಸೇರಿಸಿಕೊಳ್ಳತಕ್ಕದ್ದು. (ಅಧ್ಯಾಯ ೨. ಸೆಕ್ಷನ್-೪)
೭. ಪ್ರತಿ ಶಾಲೆಯ ಆಡಳಿತ ಮಂಡಳಿ ಶಾಲಾಭಿವೃದ್ದಿ ಯೋಜನೆಯನ್ನು ರೂಪಿಸಬೇಕು. (ಅಧ್ಯಾಯ ೪. ಸೆಕ್ಷನ್-೨೧(೨))
೮. ಶಾಲಾ ಹೆತ್ತವರ ಮತ್ತು ಪಾಲಕರ ಸಮಿತಿಯ ಸದಸ್ಯರ ೫೦% ರಷ್ಟು ಮಹಿಳಾ ಸದಸ್ಯರು ಇರಬೇಕು. (ಅಧ್ಯಾಯ ೪. ಸೆಕ್ಷನ್-೨೧(೧))
೯. ಯಾವೂದೇ ವ್ಯಕ್ತಿ ಕೇಂದ್ರ ಸರಕಾರ ನಿಗದಿಗೊಳಿಸಿದ ಅರ್ಹತೆಯನ್ನು ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ ಪಡೆದಿದ್ದರೆ ಅವರನ್ನು ಶಿಕ್ಷಕರಾಗಿ ನೇಮಿಸಬಹುದು. (ಅಧ್ಯಾಯ ೪. ಸೆಕ್ಷನ್-೨೩ (೧)(೨))
೧೦. ಖಾಸಗಿ ಶಾಲೆಗಳು ೨೫ % ತಮ್ಮ ತರಗತಿಯ ಸಂಖ್ಯೆಗನುಗುಣವಾಗಿ ಸಮಾಜದ ದುರ್ಬಲ ವರ್ಗದ ಮತ್ತು ಅನಾನುಕೂಲ ಗುಂಪಿನ ಮಕ್ಕಳಿಗೆ ಅವಖಾಶ ನೀಡಬೇಕು. ಸರಕಾರವೇ ಅವರ ವೆಚ್ಚವನ್ನು ಭರಿಸುತ್ತದೆ. (ಅಧ್ಯಾಯ ೪. ಸೆಕ್ಷನ್-೧೨(೧) ಛಿ)
೧೧. ಪ್ರಾಥಮಿಕ ಶಿಕ್ಷವನ್ನು ಪೂರೈಸಲು ಅಡ್ಡಿಯಾಗುವಂತಹ ಯಾವೂದೇ ದೇಣಿಗೆ ಮತ್ತು ಕ್ಯಾಪಿಟೇಶನ್ ಶುಲ್ಕ/ವೆಚ್ಚವನ್ನು ಮಕ್ಕಳಿಂದ ತೆಗೆದುಕೊಳ್ಳುವಂತಿಲ್ಲ. (ಅಧ್ಯಾಯ ೪. ಸೆಕ್ಷನ್-೧೩(೧))
೧೨. ಮಗುವಿಗೆ ಅಥವಾ ಮಗುವಿನ ಹೆತ್ತವರಿಗೆ ಯಾವೂದೇ ಪ್ರವೇಶ ಪರೀಕ್ಷೆ ಅಥವಾ ಸಂದರ್ಶನವನ್ನು ನಡೆಸುವಂತಿಲ್ಲ. (ಅಧ್ಯಾಯ ೪. ಸೆಕ್ಷನ್-೨(b))
೧೩. ಪ್ರಾಥಮಿಕ ಶಿಕ್ಷಣ ಮುಕ್ತಾಯಗೊಳಿಸುವ ವರೆಗೆ ಮಗುವನ್ನು ಅನಿತ್ತೀರ್ಣಗೊಳಿಸುವಂತಿಲ್ಲ.(ಅಧ್ಯಾಯ ೪. ಸೆಕ್ಷನ್-೧೬)
೧೪. ಈ ಕಾಯಿದೆಯ ಅನುಷ್ಟಾನಕ್ಕಾಗಿ ಮೇಲ್ವಿಚಾರಣೆ ಮಾಡಲು ಸ್ಥಾಪಿತ ಆಯೋಗಗಳನ್ನು ರಚಿಸಲು ಸೂಚಿಸಲಾಗಿದೆ. (ಅಧ್ಯಾಯ ೬)
೧೫. ಶಿಕ್ಷಕರ ಮತ್ತು ವಿಧ್ಯಾರ್ಥಿಗಳ ಅನುಪಾತವನ್ನು ಅನುಸರಿಸುವುದು. (ಶಿಕ್ಷಣ ಹಕ್ಕು ಕಾಯಿದೆಯ ಶೆಡ್ಯೂಲ್)
೧೬. ಜಮ್ಮು ಕಾಶ್ಮೀರವನ್ನು ಹೊರತುಪಡಿಸಿ ಉಳಿದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ. . (ಅಧ್ಯಾಯ ೧. ಸೆಕ್ಷನ್-೧(೨))
೧೭. ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಕಡ್ಡಾಯವಾಗಿದೆ. . (ಅಧ್ಯಾಯ ೫. ಸೆಕ್ಷನ್-೨(ಚಿ-h))
೧೮. ಮಕ್ಕಳಿಗೆ ಯಾವುದೇ ರೀತಿಯ ದೈಹಿಕ ದಂಡನೆ ಅಥವಾ ಮಾನಸಿಕ ಹಿಂಸೆ ನೀಡುವಂತಿಲ್ಲ. (ಅಧ್ಯಾಯ ೪. ಸೆಕ್ಷನ್-೧೭(೧))
೧೯. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸುವ್ಯವಸ್ಥಿತ ಶಾಲಾ ಕಟ್ಟಡ, ಅವರಣ ಗೋಡೆ, ಸುರಕ್ಷಿತ ಕುಡಿಯುವ ನೀರು, ಗಂಡು ಹೆನ್ನು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಕಲಿಕಾ ಸಾಮಾಗ್ರಿ, ಗ್ರಂಥಾಲಯ, ಆಟದ ಮೈದಾನ, ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಅಃ ಶಿಕ್ಷಕರ ನೇಮಕಾತಿ ಮಾಡುವುದು ಸರ್ಕಾರದ ಮತ್ತು ಸ್ಥಳೀಯ ಅಡಳಿತದ ಕರ್ತವ್ಯವಾಗಿರುತ್ತದೆ.(ಶಿಕ್ಷಣ ಹಕ್ಕು ಕಾಯಿದೆಯ ಶೆಡ್ಯೂಲ್)
೨೦. ದುರ್ಬಲ ವರ್ಗಗಳು, ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಮೂಹಗಳ ಮಕ್ಕಳು ಯಾವುದೇ ರೀತಿಯ ತಾರತಮ್ಯಕ್ಕೆ ಗುರಿಯಾಗುವುದಾಗಲಿ ಮತ್ತು ಅದರಿಂದಾಗಿ ಎಲಿಮೆಂಟರಿ ಶಿಕ್ಷಣವನ್ನು ಪೂರೈಸಲು ಇರುವ ತೊಂದರೆಯ ನಿವಾರಣೆಯನ್ನು ಖಾತ್ರಿಪಡಿಸಿಕೊಳ್ಳಬೇಕು. (ಅಧ್ಯಾಯ ೩. ಸೆಕ್ಷನ್-೯(ಅ))