+91 824 243 9895
valored@gmail.com

Childline Se Dosthi Week

ಚೈಲ್ಡ್ ಲೈನ್ ಮಂಗಳೂರು-1098
ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ-2017
2017ನೇ ನವೆಂಬರ್ 14ರಿಂದ 20ರ ವರೆಗೆ

“ಚೈಲ್ಡ್ ಲೈನ್ ಸೆ ದೋಸ್ತಿ” ಎನ್ನುವುದು ಒಂದು ವಾರಗಳ ಕಾಲ (ನವೆಂಬರ್ 14ರಿಂದ 20ರ ವರೆಗೆ) ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಆಂದೋಲನವಾಗಿದೆ. ಇದರ ಗುರಿಯು ಸಾಮಾನ್ಯ ನಾಗರಿಕರನ್ನು ಮತ್ತು ಫಲಾನುಭವಿಗಳನ್ನು ಚೈಲ್ಡ್ ಲೈನ್-1098ನ ಜೊತೆ ಕೈ ಜೋಡಿಸುವಂತೆ ಮಾಡುವುದು. ಈ ಅಭಿಯಾನವು ದೇಶದಾದ್ಯಂತ ನಡೆಯುವ ಆನೇಕ ಕಾರ್ಯಕ್ರಮ ಮತ್ತು ಚಟುವಟಿಕೆಗಳನ್ನು ಒಳಗೊಂಡಿದೆ.

ಚೈಲ್ಡ್ ಲೈನ್ ಸೆ ದೋಸ್ತಿಯ ಕಾರ್ಯ ವ್ಯಕ್ತಿಯು ಯಾವುದೇ ವೃತ್ತಿಯಲ್ಲಿದ್ದರೂ ಮಕ್ಕಳ ಸಹಾಯವಾಣಿಯ ಬಗ್ಗೆ ತಿಳಿದುಕೊಂಡು ಮಕ್ಕಳಿಗೆ ರಕ್ಷಣೆ ಕೊಡಲು ಮುಂದೆ ಬರುವಂತೆ ಮಾಡುವುದು.

ಈ ಅಭಿಯಾನದ ಮುಖ್ಯ ಉದ್ಧೇಶವು ಜನರಲ್ಲಿ ಚೈಲ್ಡ್ ಲೈನ್-1098 ಬಗ್ಗೆ ಅರಿವುವನ್ನು ಮೂಡಿಸುವುದಾಗಿದೆ.

ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಚೈಲ್ಡ್ ಲೈನ್-1098 ತನ್ನ ಸಹಾಯ ಹಸ್ತವನ್ನು ಚಾಚುತ್ತದೆ.

ನೀವು ಚೈಲ್ಡ್ ಲೈನ್-1098 ಜೊತೆ ದೋಸ್ತಿ ಅಗಬೇಕಿದ್ದಲ್ಲಿ, ನಿಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು ಗಮನಿಸಿಕೊಂಡು ಹಾಗೂ ಮಕ್ಕಳಿಗೆ ಅವಶ್ಯಕತೆಯಿದ್ದಲ್ಲಿ ಕ್ರಮ ಕೈಗೊಳ್ಳಲು ಚೈಲ್ಡ್ ಲೈನ್-1098ಗೆ ತಿಳಿಸುವುದು.

ನೀವು ಮಕ್ಕಳ ರಕ್ಷಣೆಯಲ್ಲಿ ಚೈಲ್ಡ್ ಲೈನ್-1098ನ ಸ್ವಯಂ ಸೇವಕರಾಗಬಹುದು.

“ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ” ಅಂಗವಾಗಿ ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷದ “ಚೈಲ್ಡ್ ಲೈನ್ ಸೆ ದೋಸ್ತಿ” ಸಪ್ತಾಹದ ಎಲ್ಲಾ ಕಾರ್ಯಕ್ರಮಗಳನ್ನು ಪಡಿ ಮಂಗಳೂರು,ಶಿಕ್ಷಣ ಸಂಪನ್ಮೂಲ ಕೇಂದ್ರ ಮಂಗಳೂರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ದ.ಕ.ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದ.ಕ.ಜಿಲ್ಲೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ ದ.ಕ, ರೇಡಿಯೋ ಬಿಗ್ ಎಫ್.ಎಮ್ 92.7 ರೇಡಿಯೋ ಸಾರಂಗ್ 107.8, ಇವರ ಸಹಭಾಗಿತ್ವದಲ್ಲಿ ನಡೆಯುತ್ತಿದೆ.

ಕಾರ್ಯಕ್ರಮದ ವಿವರ
(ನವೆಂಬರ 14 ರಿಂದ 20ರ ತನಕ)
14/11/2017
ಕಾರ್ಯಕ್ರಮದ ಉದ್ಘಾಟಣಾ ಸಮಾರಂಭ
ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹದ ಅಂಗವಾಗಿ ವಿವಿದ ಇಲಾಖೆಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆಯರ ನೇತೃತ್ವದಲ್ಲಿ ದಿನಾಂಕ 14/11/2017ರಂದು ಪೂರ್ವಾಹ್ನ 10.00 ಕ್ಕೆ ಸರಿಯಾಗಿ ಮಂಗಳೂರಿನ ಕದ್ರಿ ಬಾಲಭವನದಲ್ಲಿ ಪ್ರತಿಜ್ಞಾ ಸ್ವೀಕಾರ ಹಾಗೂ ಮಾಹಿತಿ ಕಾರ್ಯಗಾರವು ಅಪರಾಹ್ನ 12 ಗಂಟೆಯ ತನಕ ನಡೆಯಲಿದೆ.

15/11/2017
ಆನ್‍ಲೈನ್ ಸೇಪ್ಟೀ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಾಹಿತಿ ಕಾರ್ಯಗಾರ
ಚೈಲ್ಡ್ ಲೈನ್ ಸೆ ದೋಸ್ತಿ ದೋಸ್ತೀ ಸಪ್ತಾಹದ ಅಂಗವಾಗಿ ಆನ್‍ಲೈನ್ ಸೇಪ್ಟೀ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಾಹಿತಿ ಕಾರ್ಯಗಾರವು ಮಂಗಳೂರಿನ ಬಲ್ಮಟ ಕಾಲೇಜಿನ ಪದವಿಪೂರ್ವ ಕಾಲೇಜಿನ ವಿಧ್ಯಾರ್ಥಿಗಳಿಗೆ ನುರಿತ ಸಂಪನ್ಮೂಲಗಳಿಂದ ಮಾಹಿತಿ ಕಾರ್ಯಗಾರವು ಪೂರ್ವಾಹ್ನ 10 ಗಂಟೆಯಿಂದ 11 ಗಂಟೆಯ ತನಕ ನಡೆಯಲಿದೆ.

16/11/2017
ಆನ್‍ಲೈನ್ ಸೇಪ್ಟೀ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮೌನಜಾಥಾ
ದಿನಾಂಕ 15/11/2017 ರಂದು ಕಾರ್ಯಗಾರಕ್ಕೆ ಬಂದಿರುವ ಮಕ್ಕಳಿಂದ ಆನ್‍ಲೈನ್ ಸೇಪ್ಟೀ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮೌನಜಾಥಾವು ಬಲ್ಮಟ  ಕಾಲೇಜಿನ ಹೊರಗಡೆ ನಡೆಯಲಿದೆ

17/11/2017
ಬಾಲ್ಯವಿವಾಹ, ಬಾಲಭಿಕ್ಷಾಟಣೆ, ಬಾಲಕಾರ್ಮಿಕ ವಿಷಯದ ಬಗ್ಗೆ ಜಾಗೃತಿ ಕಾರ್ಯಕ್ರಮ
ದಿನಾಂಕ-17/11/2017ರಂದು ಮಂಗಳೂರಿನ ಸೆಂಟ್ರಲ್ ಮಾರ್ಕೆಟ್, ಲಾಲ್‍ಬಾಗ್ ಬಂದರ್, ದಕ್ಕೆ ಹಾಗೂ ಕದ್ರಿ ಪಾರ್ಕ್ ಬಳಿ ಇರುವ ಹೋಟೆಲ್, ಗ್ಯಾರೇಜ್, ರಿಕ್ಷಾ ಪಾರ್ಕ್, ಬಸ್ ನಿಲ್ದಾಣಗಳಲ್ಲಿ ಕರಪತ್ರಗಳನ್ನು ನೀಡುವುದರೊಂದಿಗೆ ಬಾಲ್ಯವಿವಾಹ, ಬಾಲಭಿಕ್ಷಾಟಣೆ, ಬಾಲಕಾರ್ಮಿಕ ವಿಷಯದ ಬಗ್ಗೆ ಅರಿವು ಮೂಡಿಸುವುದು ಹಾಗೂ ಸುರಕ್ಷಾ ಬ್ಯಾಂಡ್‍ನ್ನು ಕಟ್ಟುವುದು.

18/11/2017
ಬಾಲ್ಯವಿವಾಹ ಮುಕ್ತಗ್ರಾಮ, ಮಗು ಸ್ನೇಹಿ ಶಾಲೆ ವಿಷಯದ ಕುರಿತು ಸಮಿತಿ ರಚಿಸಿ ಕಾರ್ಯಕ್ರಮ ನೀಡುವುದು
ಬಾಲ್ಯವಿವಾಹ ಮುಕ್ತಗ್ರಾಮ, ಮಗು ಸ್ನೇಹಿ ಶಾಲೆ, ಹಾಗೂ ಬೆಂಗಳೂರಿನ ಓಯಸಿಸ್ ಸಂಸ್ಥೆಯವರಿಂದ ಮಕ್ಕಳ ಸಾಗಾಣಿಕೆಯ ಕುರಿತ ಬೀದಿನಾಟಕ, ಬೈಕ್ ರ್ಯಾಲಿ ಹಾಗೂ ಮಂಗಳೂರಿನ ಮೀನಾಕಲ್ಯ ಹಾಗೂ ಪಣಂಬೂರ್ ಬೀಚ್‍ನಲ್ಲಿ ಬೀದಿನಾಟಕ, ಬೈಕ್ ರ್ಯಾಲಿ ಮತ್ತು ಚೈಲ್ಡ್‍ಲೈನ್ ಸ್ಟಾಲ್ ಹಾಕುವುದರ ಮೂಲಕ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ.

19/11/2017
ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಅರಿವು ಕಾರ್ಯಕ್ರಮ
ಪೂರ್ವಾಹ್ನ 10 ರಿಂದ 12 ರ ತನಕ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಅರಿವು ಕಾರ್ಯಕ್ರಮ ಮಂಗಳೂರಿನ ಕದ್ರಿ ಪಾರ್ಕ್, ಸೆಂಟ್ರಲ್ ರೈಲ್ವೇ ನಿಲ್ದಾಣ, ಲಾಲ್‍ಬಾಗ್ ಕೆ.ಎಸ್.ಆರ್.ಟಿ.ಸಿ, ವಿವಿದ ಜನಸೇರುವ ಸ್ಥಳಗಳಲ್ಲಿ ಚೈಲ್ಡ್‍ಲೈನ್ ಸ್ಟಾಲ್ ಹಾಕುವ ಮೂಲಕ ಅರಿವು ಕಾರ್ಯಕ್ರಮವು ನಡೆಯುವುದು

20/11/2017
ವಿಶೇಷ ಮಕ್ಕಳಿಗೆ ವಿವಿದ ಕಾರ್ಯಕ್ರಮಗಳು ಹಾಗೂ ಪ್ರಶಸ್ತಿ ವಿತರಣೆ ಹಾಗೂ ದೋಸ್ತಿವೀಕ್ ಸಪ್ತಾಹ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮ
ಮಂಗಳೂರಿನ ಸುರತ್ಕಲ್ ಬಳಿ ಇರುವ ಲಯನ್ಸ್ ಸೇವಾ ಕೇಂದ್ರದಲ್ಲಿ ವಿಶೇಷ ಮಕ್ಕಳಿಗೆ ವಿವಿದ ಕಾರ್ಯಕ್ರಮಗಳು ಹಾಗೂ ಪ್ರಶಸ್ತಿ ವಿತರಣೆಯು ಪೂರ್ವಾಹ್ನ 10 ರಿಂದ 12 ಗಂಟೆಯ ತನಕ ನಡೆಯಲಿದೆ ಹಾಗೂ ಅಪರಾಹ್ನ 2. ಗಂಟೆಗೆ ಸರಿಯಾಗಿ ವಿವಿಧ ಇಲಾಖೆಯ ಅಧಿಕಾರಿಯವರ ನೇತೃತ್ವದಲ್ಲಿ ಕಾರ್ಯಕ್ರಮದ ಮುಕ್ತಾಯ ಸಮಾರೋಪ ನಡೆಯಲಿದೆ.

error: Content is protected !!
PADI Valored