CRCG KARKALA

ಶೈಕ್ಷಣಿಕ ರಂಗತಂಡದ ಉದ್ಘಾಟನಾ ಸಮಾರಂಭ
 ಪಡಿ ಸಂಸ್ಥೆ ಮಂಗಳೂರು, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ, ತಾಲೂಕು ಎಸ್ .ಡಿ.ಎಂ.ಸಿ ಸಮನ್ವಯ ವೇದಿಕೆ  ಕಾರ್ಕಳ, ಸಾರ್ವಜನಿಕ ಶಿಕ್ಷಣ ಇಲಾಖೆ ಕಾರ್ಕಳ, ಇವರ  ಸಂಯುಕ್ತ  ಆಶ್ರಯದಲ್ಲಿ ಶೈಕ್ಷಣಿಕ ರಂಗ ತಂಡದ ಉದ್ಘಾಟನಾ ಸಮಾರಂಭವನ್ನು ದಿನಾಂಕ ೦೬-೦೧-೨೦೧೮ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮೈನ್ ಇಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು  ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ  ಇದರ ಅಧ್ಯಕ್ಷರಾದ ದಿವಾಕರ್ ಕುಮಾರ್ ವಹಿಸಿದ್ದು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಾಲಿನಿ.ಜೆ.ಶೆಟ್ಟಿಯವರು  ಕಾರ್ಯಕ್ರಮವನ್ನು ಉದ್ಘಾಟಿಸಿ,  ಸರಕಾರಿ ಶಾಲೆಗಳ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಅವಕಾಶಗಳಿವೆ, ಅದನ್ನು ಸರಿಯಾಗಿ ಬಳಸಿಕೊಳ್ಳಿ ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ನಾಟಕ ಅಕಾಡೆಮಿ ಪರಿಷತ್ತಿನ ಸದಸ್ಯರಾದ ಬಾಸುಮ  ಕೊಡಗು ರವರು ಮಾತಾನಾಡಿ ಇಂದಿನ ಶಿಕ್ಷಣ ಅಂಕಗಳಿಕೆಯ ಶಿಕ್ಷಣ ಆಗಿರುವುದರಿಂದ ಪಠ್ಯ ಚಟುವಟಿಕೆಗಳಿಗೆ ಹೆಚ್ಚಿನ ಒತ್ತನ್ನು  ನೀಡಲಾಗುತ್ತಿದೆ. ಕೇವಲ ಅಂಕಗಳಿಗೆಯಿಂದಲೇ ಸಮಾಜದಲ್ಲಿ ಉನ್ನತ ಸ್ಥಾನವನ್ನುಗಳಿಸಬೇಕೆಂದಿಲ್ಲ, ಪಠ್ಯೇತರ ಚಟುವಟಿಕೆಗಳಿಂದಲೂ ಸಮಾಜದಲ್ಲಿ ಕೀರ್ತಿ, ಯಶಸ್ಸುಗಳನ್ನು ಗಳಿಸಹುದು. ಆದ್ದರಿಂದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ  ಸೂಕ್ತ  ಅವಕಾಶಗಳನ್ನು ಇಂತಹ  ಕಾರ್ಯಕ್ರಮದ  ಮೂಲಕ ದೊರಕಿಸಿ ಕೊಡಬಹುದು ಎಂದರು.

ಮುಖ್ಯ ಅತಿಥಿಗಳಾಗಿ  ಕು. ನಿರ್ಮಲ ಸದಸ್ಯರು, ತಾಲೂಕು ಪಂಚಾಯತ್ ಕಾರ್ಕಳ, ಪ್ರಕಾಶ್ ಕೋಟ್ಯಾನ್, ಅಧ್ಯಕ್ಷರು ತಾಲೂಕು ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ  ಕಾರ್ಕಳ, ಶೋಭಾಭಾಸ್ಕರ್,  ಕಾರ್ಯದರ್ಶಿ ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ಬೆಂಗಳೂರು , ಶ್ರೀಮತಿ ಮೈತ್ರಿ ಸಮೂಹ ಸಂಪನ್ಮೂಲ ವ್ಯಕ್ತಿ ಸಾರ್ವಜನಿಕ ಶಿಕ್ಷಣ ಇಲಾಖೆ ಕಾರ್ಕಳ, ಶ್ರೀಮತಿ ಮಾಲತಿ , ಮುಖ್ಯ ಶಿಕ್ಷಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮೈನ್,  ಶ್ರೀಮತಿ ಸೌಭಾಗ್ಯ , ಅಂಗನವಾಡಿ ಮೇಲ್ವಿಚಾರಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಡಿ ಸಂಸ್ಥೆಯ  ಸಂಯೋಜಕಿ ಸುಶ್ಮಿತಾ ಸ್ವಾಗತಿಸಿ, ಶೋಭಾಭಾಸ್ಕರ್, ಕಾರ್ಯದರ್ಶಿ ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ ಬೆಂಗಳೂರು ಪ್ರಸ್ತಾವನೆಗೈದರು,  ಪ್ರಕಾಶ್ ಕೋಟ್ಯಾನ್, ಅಧ್ಯಕರು ತಾಲೂಕು ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆ  ಕಾರ್ಕಳ ವಂದಿಸಿದರು, ಪಡಿ ಸಂಸ್ಥೆಯ   ತಾಲೂಕು ಸಂಯೋಜಕಿ ಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿದರು.