+91 824 243 9895
valored@gmail.com

ಶಾಸಕರು ಮತ್ತು ಸರಕಾರಿ ಇಲಾಖಾ ಅಧಿಕಾರಿಗಳೊಂದಿಗೆ ಮಕ್ಕಳ ಮುಖಾಮುಖಿ ಸಂವಾದ ಕಾರ್ಯಕ್ರಮ-ಪುತ್ತೂರು

ಪಡಿ ಸಂಸ್ಥೆ ಮಂಗಳೂರು ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇದರ ವತಿಯಿಂದ ಪುತ್ತೂರು ನಟರಾಜ ವೇದಿಕೆಯಲ್ಲಿ ಶಾಸಕರು ಮತ್ತು ಸರಕಾರಿ ಇಲಾಖಾ ಅಧಿಕಾರಿಗಳೊಂದಿಗೆ ಮಕ್ಕಳ ಮುಖಾ-ಮುಖಿ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇದರ ಆಡಳಿತ ಸಮಿತಿ ಅಧ್ಯಕ್ಷರಾದ ಶ್ರೀಯುತ ಸುಧಾಕರ ಶೆಟ್ಟಿ ಆಗಮಿಸಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಮಕ್ಕಳಿಗೆ ಅವಕಾಶಗಳನ್ನು ನಾವು ಒದಗಿಸಬೇಕಾಗಿದೆ. ವತ್ತು ಇಲಾಖಾ ಅಧಿಕಾರಿಗಳು, ಮತ್ತು ಶಾಸಕರ ಜೊತೆಗೆ ಮಕ್ಕಳಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಒಂದು ಅವಕಾಶ ದೊರೆತಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸುಕನ್ಯಾ ಮಾತನಾಡುತ್ತಾ ಸರಕಾರಿ ಶಾಲೆಗಳ ಉಳಿವಿಗಾಗಿ ಪಡಿಸಂಸ್ಥೆ ಕಳೆದ ಹಲವಾರು ವರ್ಷಗಳಿ ಶ್ರೀಮತಿ ಸುಕನ್ಯಾ ಮಾತನಾಡುತ್ತಾ ಸರಕಾರಿ ಶಾಲೆಗಳ ಉಳಿವಿಗಾಗಿ ಪಡಿ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದೆ. ಮಕ್ಕಳ ಹಕ್ಕುಗಳಿಗಾಗಿ ಮತ್ತು ಅವರ ಬೇಡಿಕೆಗಳಿಗಾಗಿ ಸುಂದರವಾದ ಕಾರ್ಯಕ್ರಮವನ್ನು ಸಂಸ್ಥೆ ಆಯೋಜಿಸಿರುವುದು ಶ್ಲಾಘನೀಯ. ಮಕ್ಕಳ ಅಭಿವೃದ್ಧಿಯಾಗಬೇಆದರೆ ಪೋಷಕರು ಕೂಡ ಮಕ್ಕಳ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶ್ರೀಯುತ ರೆನ್ನಿ ಡಿಸೋಜ ಮಾತನಾಡುತ್ತಾ ಮಕ್ಕಳು ಇಂದು ಕುಟುಂಬ,ಸಮುದಾಯ, ಮತ್ತು ಶಾಲೆಗಳಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಕ್ಕಳ ಹಕ್ಕುಗಳ ಅರಿವನ್ನು ನಾವು ಎಲ್ಲಾ ಕಡೆ ಪಸರಿಸಬೇಕಾಗಿದೆ. ಶೋಷಿತ,ದುರ್ಬಲ ವರ್ಗದ ಮಕ್ಕಳ ಪೋಷಣೆ ಮತ್ತು ಆರೈಕೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಕೆಲಸ ಮಾಡುತ್ತಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯಾದಾಗ್ ಅಂತಹ ಮಕ್ಕಳಿಗೆ ಸೂಕ್ತವಾದ ರಕ್ಷಣೆಯನ್ನು ಒದಗಿಸುತ್ತದೆ. ಭಿಕ್ಷೆ ಬೇಡುವ ಮತ್ತು ಅನಾಥ ತುಳಿತಕ್ಕೊಳಗಾದ ಮಕ್ಕಳನ್ನು ಕಂಡ ಕೂಡಲೇ ನಾವು ೧೦೯೮ ಕರೆ ಮಾಡಿದರೆ ಮೊದಲು ಅವರು ಬಂದು ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುತ್ತಾರೆ. ನಂತರ ಅಂತಹ ಮಕ್ಕಳಿಗೆ ಆರೈಕೆ ಹಾಗೂ ವಸತಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ಶ್ರೀಯುತ ವಝೀರ್ ಮಾತನಾಡುತಾ ಮಕ್ಕಳ ರಕ್ಷಣಾ ಘಟಕವು ಜಿಲ್ಲೆಯಲ್ಲಿದೆ. ನಂತರ ಪ್ರತೀ ತಾಲೂಕಿನಲ್ಲೂ ಮಕ್ಕಳ ರಕ್ಷಣಾಧಿಕಾರಿಗಳು ಇರುತ್ತಾರೆ. ಮಕ್ಕಳ ಯಾವುದೇ ಪ್ರಕರಣಗಳನ್ನು ತೆಗೆದು ಕೊಂಡು ಮಕ್ಕಳ ಕಲ್ಯಾಣ ಸಮಿತಿ ಮೂಲಕ ಪರಿಹರಿಸುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೂಲಕ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಅಲ್ಲದೆ ಪಂಚಾಯತ್ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿ, ಬಾಲ್ಯವಿವಾಹ ತಡೆ ಸಮಿತಿಗಳ ಮೂಲಕ ಸಮುದಾಯದಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹಾಗೂ ತೀರಾ ಬಡತನ, ಅನಾರೋಗ್ಯ ಪೀಡಿತ ಮತ್ತು ಒಂಟಿ ಪೋಷಕರಿರುವ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಕೂಡ ನೀಡಲಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಾದ ಶ್ರೀಯುತ ಸಂಜೀವ ಮಠಂದೂರು ಮಾತನಾಡುತಾ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವುದು ಉತ್ತಮ ಕೆಲಸ. ಸರಕಾರಿ ಶಾಲೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಈಗಾಗಲೇ ಸರಕಾರದಿಂದ ಹಲವಾರು ಕಾರ್ಯಕ್ರಮಗಳಿವೆ ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಲು ಅರಿವು ಕಾರ್ಯಕ್ರಮಗಳ ಅಗತ್ಯವಿದೆ. ಸರಕಾರಿ ಶಾಲೆಯ ಮಕ್ಕಳು ಯಾವಾಗಲೂ ನಿರ್ಭೀತರಾಗಿ ಬೆರೆಯುತ್ತಾರೆ. ಇವತ್ತುಉನ್ನತ ಶಿಕ್ಷಣ ಹಾಗೂ ಸರಕಾರದ ಉನ್ನತ ಹುದ್ದೆಗಳಲ್ಲಿರುವವರೆಲ್ಲರು ಸರಕಾರಿ ಶಾಲೆಗಳಲ್ಲಿ ಓದಿದವರೇ ಆಗಿದ್ದಾರೆ ಇದು ಹೆಮ್ಮೆಯ ವಿಷಯ. ಈಗಾಗಲೇ ಪುತೂರಿನ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ ೨೦ ಲಕ್ಷ ರೂ ಅನುದಾನವನ್ನು ಮೀಸಲಿಡಲಾಗಿದೆ. ರಾಗಿಕುಮೇರು ಶಾಲಾ ವಿದ್ಯಾರ್ಥಿ ಗ್ರಾಮ ಮಟ್ಟದ ಮಕ್ಕಳಿಗ್ ಮಕ್ಕಳ ಗ್ರಾಮ ಸಭೆಗಳಿವೆ. ಆದರೆ ನಗರ ವ್ಯಾಪ್ತಿಯ ಮಕ್ಕಳಿಗೆ ಇಲ್ಲ ಎಂದಾಗ ಶಾಸಕರು ಮಕ್ಕಳ ಬೇಡಿಕೆಗಳಂತೆ ನಗರ ವ್ಯಾಪ್ತಿಯ ಶಾಲೆಗಳ ಮಕ್ಕಳಿಗೆ ವಾರ್ಡ್ ಸಭೆಗಳನ್ನು ನಡೆಸಲು ಈಗಾಗಲೇ ಚಿಂತಿಸಲಾಗಿದೆ. ಶಾಲಾ ಆವರಣ ಗೋಡೆಗಳಿಗೆ ಗ್ರಾಮ ಪಂಚಾಯತ್ ಗಳಲ್ಲಿರುವ ಅನುದಾನವನ್ನು ಬಳಸಿಕೊಳ್ಳಬಹುದು. ಹಾರಾಡಿ ಶಾಲೆಯ ಮಕ್ಕಳು ತಮ್ಮ ಜಾಗದ ಸಮಸ್ಯೆಗಳನ್ನು ಮುಂದಿಟ್ಟಾಗ ಶಾಸಕರು ಅದರ ತನಿಖೆ ಈಗಾಗಲೇ ನಡೆಸಲಾಗಿದೆ ಮತ್ತು ಅದು ಪರಿಶಿಷ್ಟ ಜಾತಿಯವರ ಹೆಸರಲ್ಲಿರುವುದರಿಂದ ಅದರ ಮುಂದಿ ನ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಮತ್ತು ಇದು ತಾಂತ್ರಿಕ ಸಮಸ್ಯೆ ಎಂದು ತಿಳಿಸಿದರು. ಅರ್ಕ ಶಾಲೆಯ ವಿದ್ಯಾರ್ಥಿನಿ ನಮ್ಮ ಶಾಲೆಯ ಕಟ್ಟಡ ದುರಸ್ತಿ ಹಂತದಲ್ಲಿದೆ ಈಗಾಗಲೇ ಬಂದಿರುವ ಅನುದಾನ ಸಾಕಾಗದು ಆದುದರಿಂದ ಇದರ ಬಗ್ಗೆ ಗಮನ ಹರಿಸ ಬೇಕು ಎಂದು ಶಾಸಕರಲ್ಲಿ ವಿನಂತಿಸಿದಾಗ ಖಂಡಿತ ಈ ಕುರಿತು ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಅನುದಾನಗಳಿದ್ದರೆ ತಮ್ಮ ಶಾಲೆಗೆ ನೀಡಲು ಸೂಚಿಸುತ್ತೇನೆ ಎಂದರು. ಮುರ ಶಾಲಾ ವಿದ್ಯಾರ್ಥಿನಿ ತಮ್ಮ ಶಾಲೆಯ ಜಾಗದ ರೆಕಾರ್ಡ್ ಇನ್ನೂ ಆಗಲಿಲ್ಲ ಇಲ್ಲಿಯೂ ಖಾಸಗಿ ವ್ಯಕ್ತಿಗಳಿಂದ ತೊಂದರೆ ಇದೆ ಎಂದಾಗ ಇದರ ಬಗ್ಗೆ ಗಮನ ಹರಿಸಲಾಗುವುದು ಮತ್ತು ಇದರ ಕುರಿತು ಶಿಕ್ಷಣಾಧಿಕಾರಿಗಳಲ್ಲಿ ವರದಿ ನೀಡುವಂತೆ ತಿಳಿಸಿದರು. ರಾಗಿಕುಮೇರು ಶಾಲಾ ವಿದ್ಯಾರ್ಥಿ ನಮ್ಮ ಶಾಲೆಯಲ್ಲಿ ಈಗಾಗಲೇ ಆವರಣ ಗೋಡೆ ಸಮಸ್ಯೆಯನ್ನು ನಗರ ಸಭೆ,ಜನಪ್ರತಿನಿಧಿಗಳಲ್ಲಿ ಹೇಳಿಕೊಂಡಾಗಲೂ ಅದಕ್ಕೆ ಪರಿಹಾರ ದೊರೆಯಲಿಲ್ಲ ಆದುದರಿಂದ ನಮ್ಮ ಎಸ್.ಡಿ.ಎಮ್.ಸಿ ಯವರೇ ಸೇರಿ ಈಗ ತಂತಿಬೇಲಿ ಮತ್ತು ಗೇಟ್ ಮಾದಿದ್ದಾರೆ ಆದುದರಿಂದ ಶಾಸಕರು ತಮಗೆ ಸುಸಜ್ಜಿತ ಆವರಣಾ ಗೋಡೆಗೆ ಸಹಾಯ ಮಾಡಬೇಕು ಎಂದು ಆಗ್ರಹಿಸಿದರು. ಆಗ ಶಾಸಕರು ನಗರ ಸಭೆಗಳಲ್ಲಿ ಯಾವುದೇ ಅನುದಾನಗಳು ಶಾಲೆಗಳಿಗೆ ಇಲ್ಲ ಆದರೆ ಗ್ರಾಮ ಪಂಚಾಯತ್ ಗಳಲ್ಲಿ ಇದೆ ಇದನ್ನು ಬಳಸಿಕೊಳ್ಳಬಹುದು ಎಂದರು. ನಂತರ ಕಬಕ ಶಾಲೆಯ ವಿದ್ಯಾರ್ಥಿ ನಮ್ಮ ಶಾಲಾ ಕಟ್ಟಡ ದುರಸ್ತಿ ಹಂತದಲ್ಲಿದೆ ಅದಕ್ಕೆ ಅನುದಾನ ಬೇಕಾಗಿದೆ ಎಂದಾಗ ಗ್ರಾಮ

ಪಂಚಾಯತ್ ನಲ್ಲಿ ಇದಕ್ಕೆ ಅನುದಾನಗಳಿರುವುದರಿಂದ ಅದನ್ನು ಬಳಸಿಕೊಳ್ಳುವ ಬಗ್ಗೆ ತಿಸಿದರು. ಮಣಿಕ್ಕರ ಶಾಲಾ ವಿದ್ಯಾರ್ಥಿನಿ ನಮ್ಮದು ತೀರ ಹಿಂದುಳಿದಿರುವ ಪ್ರದೇಶದಲ್ಲಿದೆ ಆದುದರಿಂದ ನಮಗೆ ಮಕ್ಕಳು ಶಾಲೆಗೆ ಹೊಗಲು ಬಸ್ಸಿನ ವ್ಯವಸ್ಥೆ ಕಲ್ಪಿಸ ಬೇಕು ಎಂದಾಗ ಈ ಬಗ್ಗೆ ರಸ್ತೆ ಸಾರಿಗೆ ಅಧಿಕಾರಿಗಳಿಗೆ ಗಮನ ಹರಿಸಲು ತಿಳಿಸಲಾಗುವುದು ಎಂದು ತಿಳಿಸಿದರು. ಕೊಂಬೆಟ್ಟು ಶಾಲಾ ವಿದ್ಯಾರ್ಥಿನಿ ಕ್ರೀಡಾಂಗಣ ಇರಬೇಕು ತಾಲೂಕು ಮಟ್ಟದ ಕ್ರೀಡೆಗಳು ನಡೆದಾಗ ನಮಗೆ ಕಷ್ಟವಾಗುತ್ತಿದೆ ಎಂದಾಗ ಶಾಸಕರು ಕಾರ್ಯಕ್ರಮಗಳು ನಡೆದಾಗ ಮೈಕ್ ಶಬ್ದ ಕಡಿಮೆ ಮಾಡಲು ತಿಳಿಸಲಾಗುವುದು ಎಂದು ತಿಳಿಸಲಾಯಿತು. ನಂತರ ಕಾರ್ಯಕ್ರಮದಲ್ಲಿ ರಂಗ ತಂಡದ ವತಿಯಿಂದ ಸಮುದಾಯ ಭಾಗವಹಿಸುವಿಕೆಯ ಕುರಿತು ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಪಡಿ ಸಂಸ್ಥೆಯ ತಾಲೂಕು ಸಂಯೋಜಕಿ ಮಮತಾ ರೈ ಪ್ರಾಸ್ತಾವಿಸಿ ಅಧ್ಯಕ್ಶಕೆ ನಯನಾ ರೈ ಸ್ವಾಗತಿಸಿದರು.ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯರಾದ ಹರಿಣಾಕ್ಶಿಯವರ ನಿರೂಪಣೆಯಲ್ಲಿ ಶ್ರೀಯುತ ಸೇಸಪ್ಪ ಮತ್ತು ಜೊಹರಾ ನಿಸಾರ್ ಧನ್ಯವಾದವಿತ್ತರು.

error: Content is protected !!
PADI Valored