+91 824 243 9895
valored@gmail.com

ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ- ಜಿಲ್ಲಾ ಮಟ್ಟದ ತರಬೇತಿ

ಪಡಿ ಮತ್ತು ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್ ಹಾಗೂ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ(ರಿ) ಇವರುಗಳ ಜಂಟಿ ಆಶ್ರಯದಲ್ಲಿ “ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ- ಜಿಲ್ಲಾ ಮಟ್ಟದ ತರಬೇತಿ” ಎರಡು ದಿನಗಳ ಕಾರ್ಯಾಗಾರವು ಮಣಿಪಾಲ ವಿಶ್ವವಿದ್ಯಾಲಯದ ಹೆಲ್ತ್ ಸೈನ್ಸ್ ಲೈಬ್ರೆರಿಯ ಸಭಾಂಗಣದಲ್ಲಿ ದಿನಾಂಕ 5.02.2019 ರಿಂದ 6.02.2019 ರಂದು ನಡೆಯಿತು. ಕಾರ್ಯಾಗಾರದ ಉಧ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಗ್ರೇಸಿ ಗೋನ್ಸಾಲ್ವೆನ್ಸ್‍ರವರು ನಡೆಸಿದರು. ಪಡಿ ನಿರ್ದೇಶಕರಾದ ರೆನ್ನಿ ಡಿಸೋಜಾ ರವರು ಕಾರ್ಯಾಗಾರದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‍ನ ಮುಖ್ಯಸ್ಥರಾದ ಲೆನಾ ಆಶೋಕ್ ಹಾಗೂ ಕಾರ್ಕಳ ಟಿ. ಎಮ್. ಎ. ಪೈ ಆಸ್ಪತ್ರೆಯ ವೈದ್ಯಾಧಿಕಾರಿಯಾದ ಸತೀಶ್ ನಾಯ್ಕ್ ಮತ್ತು ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ಸುಲೋಚನಾ ಕೊಡವೂರುರವರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಆನಂದ ಲೋಬೋರವರು ತರಬೇತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ಆಯ್ದ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್.ಡಿಎಮ್.ಸಿ ಸದಸ್ಯರು ಹಾಗೂ ಶಿಕ್ಷಣಾಸಕ್ತರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ಸರಕಾರವು ಹೊರಡಿಸಿರುವ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ನೀತಿ 2016ರ ಅನ್ವಯ ಮಕ್ಕಳ ರಕ್ಷಣಾ ನೀತಿಯನ್ನು ಶಾಲೆಗಳಿಗನುಗುಣವಾಗಿ ಹೇಗೆ ಅಭಿವೃದ್ಧಿಪಡಿಸಬಹುದು ಮತ್ತು ಕರಡು ನೀತಿಯನ್ನು ರೂಪಿಸಲಾಯಿತು.

 

error: Content is protected !!
PADI Valored