+91 824 243 9895
valored@gmail.com

ಗುಣಾತ್ಮಕ ಶಿಕ್ಷಣಕ್ಕಾಗಿ ಮಕ್ಕಳ ರಂಗ ಕಲಾತಂಡದ ಬಳಕೆ ಕಾರ್ಯಾಗಾರ

‘ಮಗುಸ್ನೇಹಿ ಸಮಾಜದತ್ತ ನಮ್ಮ ಹೆಜ್ಜೆ’
ಗುಣಾತ್ಮಕ ಶಿಕ್ಷಣಕ್ಕಾಗಿ ಮಕ್ಕಳ ರಂಗ ಕಲಾತಂಡದ ಬಳಕೆ ಕಾರ್ಯಾಗಾರ ಮತ್ತುಅಂಕುರ (ಮಗುಸ್ನೇಹಿ ಶಿಕ್ಷಣ ಮಾಹಿತಿ ಕೈಪಿಡಿ) ಬಿಡುಗಡೆ ಕಾರ್ಯಕ್ರಮವು ರೋಶಿನಿ ನಿಲಯ ಸಭಾಂಗಣ, ವೆಲೆನ್ಸಿಯಾ, ಮಂಗಳೂರು ಇಲ್ಲಿ ದಿನಾಂಕ ೨೬ ಮತ್ತು ೨೭ ಜನವರಿ ೨೦೧೯ ರಂದು ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಪಡಿ ನಿರ್ದೇಶಕರಾದ ರೆನ್ನಿ ಡಿಸೋಜರವರು ಕಾರ್ಯಕ್ರಮದ ಕುರಿತಯ ಪ್ರಾಸ್ತವಿಕ ಮಾತುಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಬಾಸುಮ ಕೊಡಗುರವರು ಅಂಕುರ ಪುಸ್ತಕ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಉಡುಪಿ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ಸುಲೋಚನಾ ಕೊಡವೂರು ಮತ್ತು ಬಂಟ್ವಾಳ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ಸವಿತಾ ನಿರ್ಮಲ್ ಉಪಸ್ಥಿತರಿದ್ದರು. ನಂತರ ಸಂಪನ್ಮೂಲ ವ್ಯಕ್ತಿಯಾದ ಬಾಸುಮ ಕೊಡಗು ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ನಡೆಸಿದರು. ಪ್ರಮೂಖವಾಗಿ ಮಕ್ಕಳ ಹಕ್ಕುಗಳ ಶೈಕ್ಷಣಿಕ ರಂಗ ತಂಡದ ವಿಸ್ತರಣೆಯ ಕುರಿತು ಹಾಗೂ ಮುಂದಿನ ಯೋಜನೆಯ ಬಗ್ಗೆ ಚರ್ಚೆ ನಡೆಯಿತು.

 

error: Content is protected !!
PADI Valored