ಪಡಿ ಮತ್ತು ಜಿಲ್ಲಾ ಶಿಕ್ಷಣ ಶಿಕ್ಷಕ ತರಬೇತಿ ಸಂಸ್ಥೆ ದ.ಕ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಡಿ.ಎಲ್.ಇಡಿ ಪಠ್ಯಕ್ರಮ- ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ಮತ್ತು ಮೌಲ್ಯಮಾಪನ ಕುರಿತ ಕಾರ್ಯಾಗಾರವು ದಿನಾಂಕ ೧೪.೦೨.೨೦೧೯ ರಂದು ಕೊಡಿಯಾಲ್ ಬೈಲ್ ನ ಜಿಲ್ಲಾ ಶಿಕ್ಷಣ ಶಿಕ್ಷಕ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಜರಗಿತು. ಪಡಿ ನಿರ್ದೇಶಕರಾದ ರೆನ್ನಿ ಡಿಸೋಜ ಕಾರ್ಯಾಗಾರದ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಶಿಕ್ಷಣ ಶಿಕ್ಷಕ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಸಿಪ್ರಿಯನ್ ಮೋಂತೆರೊರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಾಗಾರಕ್ಕೆ ಶುಭ ಆರೈಸಿದರು. ಕಾರ್ಯಾಗಾರವನ್ನು ಪಡಿಯ ಪ್ರೋಗ್ರಾಮ್ ಮ್ಯಾನೆಜರ್ ಅನಾ ಪೆರ್ನಾಂಡಿಸ್ ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ದ.ಕ ಜಿಲ್ಲೆಯ ಡಿ.ಎಲ್.ಇಡಿ ಸಂಸ್ಥೆಗಳ ಉಪನ್ಯಾಸಕರಾದ ರೊನಾಲ್ಡ್, ಮಂಜು ಆರ್, ಅನಿತಾ ಪೆರ್ನಾಂಡಿಸ್, ಸಿಲೆರಿಯಾ ಡಿ ಕಾಸ್ತ ರವರು ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ವಿವಿಧ ಕಾಲೇಜುಗಳ ಡಿ.ಎಲ್.ಇಡಿ ಪ್ರಶಿಕ್ಷಾಣಾರ್ಥಿಗಳು ಉಪಸ್ಥಿತರಿದ್ದರು. ಡಿ.ಎಲ್.ಇಡಿ ಕಾರ್ಯಾಗಾರದಲ್ಲಿ ಪಠ್ಯಕ್ರಮ ಮತ್ತು ಪ್ರಶಿಕ್ಷಾಣಾರ್ಥಿಗಳು ಸ್ವ ಮೌಲ್ಯಮಾಪನ ಪರಿಕರ ತಯಾರಿ ಕುರಿತಂತೆ ಸಂವಾದ ನಡೆಯಿತು.