+91 824 243 9895
valored@gmail.com

ಶೈಕ್ಷಣಿಕ ಸಂಸ್ಥೆಗಳಿಗೆ ಅನುಮತಿ ನೀಡುವಾಗ ಮಕ್ಕಳ ರಕ್ಷಣಾ ನೀತಿ ಕಡ್ಡಾಯವಾಗಲಿ- ಎಮ್.ಪಿ. ಜ್ಙಾನೇಶ್

ಶೈಕ್ಷಣಿಕ ಸಂಸ್ಥೆಗಳಿಗೆ ಅನುಮತಿ ನೀಡುವಾಗ ಮಕ್ಕಳ ರಕ್ಷಣಾ ನೀತಿ ಕಡ್ಡಾಯವಾಗಲಿ-
ಎಮ್.ಪಿ. ಜ್ಙಾನೇಶ್, ಶಿಕ್ಷಣ ಸಂಯೋಜಕರು. ಸಾರ್ವಜನಿಕ ಶಿಕ್ಷಣ ಇಲಾಖೆ

ಪಡಿ ಸಂಸ್ಥೆ ಮಂಗಳೂರು ಸಹಬಾಗಿತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ(ರಿ) ಸಹಕಾರದೊಂದಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿಯ ಕುರಿತ ಜಿಲ್ಲಾ ಮಟ್ಟದ ಎರಡು ದಿನಗಳ ಕಾರ್ಯಗಾರದ ಉಧ್ಘಾಟನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ಎಮ್.ಪಿ ಜ್ಙಾನೇಶ್ ಇವರು ನಡೆಸಿಕೊಟ್ಟಿದ್ದು ಶಿಕ್ಷಣ ವ್ಯವಸ್ಥೆಯಲ್ಲಿ ನಿಯಮಗಳನ್ನು ರಚಿಸುವಾಗ ಮಕ್ಕಳ ನೆಲೆಯಲ್ಲಿ ರೂಪಿಸಬೇಕು. ಮಕ್ಕಳಿಗೆ ಯಾವುದೇ ರೀತಿಯ ಶೋಷಣೆ ರಹಿತ ಗುಣಮಟ್ಟದ ಶಿಕ್ಷಣವನ್ನು ಪ್ರತಿಯೊಬ್ಬ ಮಗುವಿಗೆ ನೀಡಬೇಕು. ಶಿಕ್ಷಕರು ಮಕ್ಕಳನ್ನು ವೈಜ್ಞಾಣಿಕ ಚಿಂತಕರನ್ನಾಗಿ ಮಾಡಿದಲ್ಲಿ ನಮ್ಮ ಸಮಾಜ ಯಾವುದೇ ರೀತಿಯಲ್ಲಿ ಸಂಘರ್ಷಣೆ ಒಳಗಾಗದಂತೆ ಉತ್ತಮ ಭವಿಷ್ಯ ನಿರೂಪಣೆಯಾಗುತ್ತದೆ ಹಾಗೂ ಶೈಕ್ಷಣಿಕ ಸಂಸ್ಥೆಗಳಗೆ ಅನುಮತಿ ನೀಡುವಾಗ ಮಕ್ಕಳ ರಕ್ಷಣಾ ನೀತಿಯನ್ನು ಕಡ್ಡಾಯಗೊಳಿಸಬೇಕು ಎಂದು ತಮ್ಮ ಉದ್ಘಾಟನಾ ಮಾತಿನಲ್ಲಿ ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿಯಾದ ಉಸ್ಮಾನ್, ಇವರು ಮುಖ್ಯ ಅತಿಥಿಯಾಗಿ ಮಾತನಾಡಿ ಮಕ್ಕಳ ರಕ್ಷಣಾ ನೀತಿಯನ್ನು ಅನುಷ್ಠಾನ ಮಾಡುವಲ್ಲಿ ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಮಿತಿಯನ್ನು ರಚನೆ ಮಾಡಿದ್ದು ಆಮೂಲಕ ಶೈಕ್ಷಣಿಕ ಸಂಸ್ಥೆಗಳಲ್ಲಿ, ಮದರಸಗಳಲ್ಲಿ, ವಸತಿ ನಿಲಯಗಳಲ್ಲಿ ಮಕ್ಕಳ ರಕ್ಷಣಾ ನೀತಿಯನ್ನು ಅನುಷ್ಟಾನ ಮಾಡುವುದರ ಬಗ್ಗೆ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೇ ಈ ಬಗ್ಗೆ ತರಬೇತಿಯನ್ನು ಸಹ ನೀಡಲಾಗಿದ್ದು ಇದರ ಫಲಿತಾಂಶವಾಗಿ ಕೆಲವೊಂದು ಶಾಲೆಗಳಲ್ಲಿ ನೀತಿ ರಚನೆಯಾಗಿದ್ದು ಆದರೆ ಅದರ ಬಗ್ಗೆ ಸೂಕ್ತವಾದ ಮಾಹಿತಿ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಪರಿಣಾಮಕಾರಿಯಾಗಿ ರಚನೆ ಮಾಡುವಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಾರ್ಯನಿರ್ವಹಿಸುತ್ತಾ ಇದೆ ಎಂದು ಹೇಳಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರೆನ್ನಿ ಡಿ’ಸೋಜ ಇವರು ಪ್ರಾಸ್ತವಿಕ ಮಾತುಗಳನ್ನಾಡಿ ಮಕ್ಕಳ ರಕ್ಷಣಾ ನೀತಿ ೨೦೧೬ ರಲ್ಲಿ ಜಾರಿಗೆ ಬಂದರೂ ಇನ್ನೂ ಶಾಲೆ, ಮದರಸ, ವಸತಿನಿಲಯಗಳಲ್ಲಿ ಈ ನೀತಿಯ ಅನುಷ್ಠಾನವಾಗದೆ ಇರುವುದು ಇಚ್ಛಾ ಶಕ್ತಿಯ ಕೊರತೆ ಪ್ರಮುಖ ಕಾರಣವಾಗಿದೆ. ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ಇಲಾಖೆ, ನಾಗರಿಕ ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಿಬೇಕಾದ ಅನಿವಾರ್ಯತೆ ಇದೆ ಎಂದು ಅಧ್ಯಕ್ಷೀಯ ಮಾತಿನಲ್ಲಿ ಹೇಳಿದರು.
ವೇದಿಕೆಯಲ್ಲಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಚೈಲ್ಡ್ ರೈಟ್ ಟ್ರಸ್ಟ್‌ನ ವಾಸುದೇವ ಶರ್ಮ ಹಾಗೂ ವಕ್ಪ್ ಇಲಾಖೆಯ ಹಿರಿಯ ಸಹಾಯಕರಾದ ಅಜ್ಮತ್ ಹುಸೇನ್ ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪ್ರೇಮಿ ಪೆರ್ನಾಂಡಿಸ್‌ರವರು ಉಪಸ್ಥಿತರಿದ್ದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ಪ್ರೇಮಿ ಪೆರ್ನಾಂಡಿಸ್ ಸ್ವಾಗತಿಸಿ, ಪಡಿ ಸಂಸ್ಥೆಯ ತಾಲೂಕು ಸಂಯೋಜಕರಾದ ಮಮತಾ ರೈ ವಂದಿಸಿದರು.  ಪಡಿಯ ಜಿಲ್ಲಾ ಸಂಯೋಜಕರಾದ ಜಯಂತಿರವರು ಕಾರ್ಯಕ್ರಮ ನಿರೂಪಿಸಿದರು.

error: Content is protected !!
PADI Valored